Name of Complainant | |
Date of Complaint | August 31, 2022 |
Name(s) of companies complained against | Airtel |
Category of complaint | Internet Services |
Permanent link of complaint | Right click to copy link |
Share your complaint on social media for wider reach | |
ನಾನು ಈ Daisycash ಅಪ್ಲಿಕೇಶನ್ ಮುಖೇನ 20000 ಸಾವಿರ ರೊಪಾಯಿಗೆ ಲೋನ್ ಅಪ್ಲೆ ಮಾಡಿದ್ದೆ ಆದರೆ ಕಂಪನಿ 4000 ರೊಪಾಯಿ ಮಾತ್ರ ಅಪ್ರೂ ಅಗಿದೆ ಎಂದು ತಿಳಿಸಿತ್ತು. ಆದರೆ ಹಣವನ್ನು ನನ್ನ ಅಕೌಂಟ್ಗೆ 2400 ರೊಪಾಯಿ ಸಂದಾಯ ಮಾಡಿತು.ಮತ್ತೆ ಕಂಪನಿ ಕಡೆಯಿಂದ ವ್ಯಾಟ್ಸಪ್ ಮುಖಾಂತರ ಸಂದೇಶ ಕಳಿಸಿ 2400 ರೂಪಾಯಿ ನಮ್ಮ ಅಕೌಂಟ್ಗೆ ಜಮಾ ಮಾಡಿ ನಮ್ಮ ಕಡೆಯಿಂದ ತೊಂದರೆ ಆಗಿದೆ ಎಂದು ಹೇಳಿದಾಗ 2400 ರೊಪಾಯಿ ಹಣವನ್ನು ಆ ದಿನವೇ ಸಂದಾಯ ಮಾಡಿದೆ. 4 ದಿನಗಳ ತರುವಾಯ ನೀವು 4000 ರೊಪಾಯಿಯನ್ನು ಸಂದಾಯ ಮಾಡಿ ಎಂದು ಪ್ರತಿ 5 ನಿಮಿಷಕ್ಕೊಮ್ಮೆ ದೂರವಾಷಿ ಕರೆ ವ್ಯಾಟ್ಸಪ್ ಮೆಸೇಜ್ ಮಾಡುತ್ತಾ ಇದ್ದರು .ನಾನು ಏನಕ್ಕೆ ನಿಮಗೆ 4000 ರೊಪಾಯಿಕೊಡಬೇಕೆಂದು ಸಂದೇಶ ಕಳಿಸಿದೆ.ಕೊಟ್ಟರೆ ಸರಿ ಇಲ್ಲದಿದ್ದರೆ ನಿಮ್ಮ ಕಾಂಟ್ಯಾಕ್ಸ ನಂಬರ್ ಗೆ ನಿಮ್ಮ ಕುಟುಂಬದ ನಂಬರ್ಗೆ ಅಶೀಲ್ಲ ಸಂದೇಶ ರವಾನಿಸಲಾಗಿಸುವುದು ಎಂದು ತಿಳಿಸಿದರು. ನಾನು ಒಂದು ನಯಾ ಪೈಸೆಯನ್ನು ಸಹಾ ನೀಡುವುದಿಲ್ಲಾ ಎಂದು ಹೇಳಿದಾಗ ಅವಾಚ್ಯ ಶಬ್ದಗಳಿಂದ ಸಂದೇಶ ಕಳುಹಿಸಿದರು.4000 ರೊಪಾಯಿ ಕೊಡದಿದ್ದರೆ ನಿಮ್ಮ ಬೆತ್ತಲೆ ಚಿತ್ರಗಳನ್ನು ಹಾಕುವುದಾಗಿ ಹೆದರಿಸಿದರು. ನಾನು ಆಗಲೂ ಕೊಡುವುದಿಲ್ಲ ಎಂದಾಗ ನನ್ನ ಪೋನ್ ಬುಕ್ ನಲ್ಲಿದ್ದ ನಂಬರ್ಗಳನ್ನು ಉಪಯೋಗಿಸಿ ಅಶೀಲ್ಲಾ ಚಿತ್ರಗಳನ್ನು ಕಳುಹಿಸಿದರು ಕೊನೆಗೆ 4000 ರೊಪಾಯಿಗಳನ್ನು ಅವರ ಅಕೌಂಟ್ಗೆ ವರ್ಗಾಯಿಸಿದೆ..ಮತ್ತೆ ಪದೇ ಪದೇ ಹಣ ಸಂದಾಯದ ಸಂದೇಶಗಳು ಬರುತ್ತಿದ್ದು ಜೀವನ ಜಿಗುಪ್ಸೆಯಾಗಿದೆ.ದಯಮಾಡಿ ನನಗೆ ಸಹಾಯ ಮಾಡಿ.ಒಂದು ಬಿಡಿಗಾಸನ್ನೂ ತೆಗೆದುಕೊಳ್ಳದ ನಾನು ಮರ್ಯಾದೆಗೆ ಅಂಜಿ ಬದುಕು ನಿರ್ಭಾರವೆಂದು ತಿಳಿದಿದ್ದೇನೆ.
Image Uploaded by Arunkumar mh: